ಮುಂಬೈ, ಮಾ 17 (DaijiworldNews/DB): ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕಾದರೆ 3 ಕೋಟಿ ರೂ.ಗಳನ್ನು ನೀಡಬೇಕು ಎಂಬುದಾಗಿ ಬೇಡಿಕೆ ಬಂದಿತ್ತು ಎಂದು ಸಚಿವರ ಪುತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಚಿವರ ಪುತ್ರ ಅಮೀರ್ ಮಲಿಕ್ ನೀಡಿದ ದೂರಿನ ಮೇರೆಗೆ ವಿಬಿ ನಗರ ಪೊಲೀಸರು ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಮ್ತಿಯಾಜ್ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ ಇಮೇಲ್ ಕಳುಹಿಸಿ, 3 ಕೋಟಿ ರೂ. ನೀಡಿದರೆ ಮಲಿಕ್ ಅವರನ್ನು ಜಾಮೀನಿನ ಮೇಲೆ ಹೊರತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂದು ದೂರನಲ್ಲಿ ತಿಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯವು ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಫೆ. 23ರಂದು ಬಂಧಿಸಿತ್ತು.