ಬೆಂಗಳೂರು, ಮಾ 17 (DaijiworldNews/HR): ಬೆಂಗಳೂರಿನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ದಾಳಿಗೆ ಒಳಗಾಗಿದ್ದ ಬಿಡಿಎ ಅಧಿಕಾರಿಯೊಬ್ಬರನ್ನು ವಂಚಿಸಿದ ಘಟನೆ ನಡೆದಿದೆ.
ನಾಲ್ವರು ಆರೋಪಿಗಳು ಎಸಿಬಿ ದಾಳಿಗೊಳಗಾಗಿದ್ದ ಹೆಚ್ ಎಸ್ ಆರ್ ಲೇಔಟ್ ಬಿಡಿಎ ಸಹಾಯಕ ಇಂಜಿನಿಯರ್ ಅರವಿಂದ್ ಎಂಬುವವರನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸುವುದಾಗಿ ನಂಬಿಸಿ 10 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದರು ಎಂದು ತಿಳಿದು ಬಂದಿದೆ.
ಇನ್ನು 1.18 ಎಕರೆ ಜಮೀನು ಕಡತದ ವಿಚಾರವಾಗಿ ಬಿಡಿಎ ಅಧಿಕಾರಿ ಅರವಿಂದ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ತಾವು ಬಿಡಿಎ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ತಮ್ಮನ್ನು ಪ್ರಕರಣದ ಆರೋಪದಿಂದ ಮುಕ್ತಗೊಳಿಸುವುದಾಗಿ ಹೇಳಿ ಆರೋಪಿಗಳು ಸದಾಶಿವನಗರದ ಕೆಫೆ ಕಾಫಿ ಡೇಗೆ ಕರೆಸಿ 10 ಲಕ್ಷ ರೂಪಾಯಿ ಹಣ ಪಡೆದಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರವೀಣ್, ಚೇತನ್, ಮನೋಜ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.