ತಮಿಳುನಾಡು, ಮಾ 17 (DaijiworldNews/HR): ನಾಗರಕೋಯಿಲ್ ಶಾಸಕ ಎಂ ಆರ್ ಗಾಂಧಿ ಮೊಮ್ಮಗ ಎಂದು ಬರೆಯಲಾದ ನಂಬರ್ ಪ್ಲೇಟ್ ಹೊಂದಿರುವ ಬೈಕ್ನ ಮೇಲೆ ಯುವಕನೊಬ್ಬ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಜೆಪಿಯ ಎಂ ಆರ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ಕ್ಷೇತ್ರದ ಶಾಸಕರಾಗಿದ್ದು, ಅವರ ಮೊಮ್ಮಗ ನಾಗರಕೋಯಿಲ್ ಶಾಸಕ ಎಂ ಆರ್ ಗಾಂಧಿ ಮೊಮ್ಮಗ ಎಂದು ಬೈಕ್ ನಂಬರ್ ಪ್ಲೇಟ್ ಮೇಲೆ ಬರೆದುಕೊಂಡಿದ್ದಾನೆ.
ಗಾಂಧಿ ಮೊಮ್ಮಗ ಎಂದುಕೊಂಡಿರುವ ಈ ಯುವಕ ಯಾರೆಂದು ಪರಿಶೀಲಿಸಿದಾಗ ಆತ ಅಮರೀಶ್, ಎಂ.ಆರ್. ಗಾಂಧಿ ಆಪ್ತ ಕಣ್ಣನ್ ಪುತ್ರ ಎಂದು ತಿಳಿದುಬಂದಿದೆ.
ಇನ್ನು ಈ ಫೋಟೋ ನೋಡಿದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ಸದಸ್ಯರು ಮಾತ್ರ ಕೃತಜ್ಞತೆ ಹಾಗೂ ಅಭಿಮಾನದ ರೂಪದಲ್ಲಿ ಈ ಯುವಕ ಈ ರೀತಿ ಬೈಕ್ ಮೇಲೆ ಬರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.