ಬೆಂಗಳೂರು, ಮಾ 17 (DaijiworldNews/HR): ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಜೀದಾ ಬೇಗಂ(66) ಎಂಬ ಮಹಿಳೆ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಮಧ್ಯಪ್ರವೇಶಿಸುವವರ ವಿಚಾರಣೆ ನಡೆಸುವಂತೆ ಹೈಕೋರ್ಟ್ ಅನ್ನು ಒತ್ತಾಯಿಸಿದ್ರೂ, ನ್ಯಾಯಾಲಯ ಅವರನ್ನ ಪ್ರಚೋದಿಸಲಿಲ್ಲ.ಅವರ ವಾದಗಳು ಮತ್ತು ಸಲ್ಲಿಕೆಗಳನ್ನ ಒತ್ತಾಯಿಸಲು ಅವಕಾಶ ನೀಡಲಿಲ್ಲ ಆ ಮೂಲಕ 'ಮೌಖಿಕ ತತ್ವ'ವನ್ನು ಉಲ್ಲಂಘಿಸಿದೆ ಎಂದು ಬೇಗಂ ಹೇಳಿದ್ದಾರೆ.
ಇನ್ನು ಶಿಕ್ಷಣವನ್ನು ಪಡೆಯಲು ಹೋಗುವಾಗ ಹದಿಹರೆಯದ ಹುಡುಗಿಯರು ತಮ್ಮನ್ನು ತಾವು ಮುಚ್ಚಿಕೊಳ್ಳುತ್ತಾರೆ, ಇದು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿಲಾಗಿದೆ.