ಮೈಸೂರು, ಮಾ 17 (DaijiworldNews/HR): ಅಪ್ಪು ಇಲ್ಲದ ಹುಟ್ಟುಹಬ್ಬದ ಆಚರಣೆ ತುಂಬ ದುಃಖದ ವಿಚಾರ. ಫಿಲಂಸಿಟಿಗೆ ಪುನೀತ್ ರಾಜ್ಕುಮಾರ್ ಹೆಸರಿಟ್ಟರೆ ಸಂತಸವಾಗುತ್ತದೆ. ಕುಟುಂಬ ಸದಸ್ಯನಾಗಿ ನಾನು ಒತ್ತಾಯ ಮಾಡಲ್ಲ ಎಂದು ನಟ ಡಾ.ಶಿವರಾಜ್ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪುನೀತ್ ಹುಟ್ಟುಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನು ಶೇರ್ ಮಾಡುತ್ತಿದ್ದೆವು. ಅಪ್ಪು ಎಲ್ಲರ ಹೃದಯದಲ್ಲೂ ಹಚ್ಚ ಹಸಿರಾಗಿ ಉಳಿದಿದ್ದಾರೆ. ಫಿಲಂಸಿಟಿಗೆ ಪುನೀತ್ ರಾಜ್ಕುಮಾರ್ ಹೆಸರಿಟ್ಟರೆ ಸಂತಸವಾಗುತ್ತದೆ ಎಂದರು.
ಇನ್ನು ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ. ಅದರಂತೆ ಪುನೀತ್ ಹೆಸರಿಟ್ಟರೂ ಸಂತೋಷ. ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಮಂದಿ ಇದ್ದಾರೆ. ಅವರ ಹೆಸರನ್ನೂ ಇಡಬಹುದು. ಅದಕ್ಕೂ ನನ್ನ ಸಂತಸವಿದೆ ಎಂದು ಹೇಳಿದ್ದಾರೆ.