ನವದೆಹಲಿ, ಮಾ 16 (DaijiworldNews/DB): ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಈ ತಿಂಗಳಾಂತ್ಯಕ್ಕೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದರೆ ಇದುವರೆಗೆ ಚೀನಾ ಆಡಳಿತವು ಈ ಭೇಟಿ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಒಂದು ವೇಳೆ ಅವರು ಭಾರತ ಪ್ರವಾಸ ಕೈಗೊಂಡಿದ್ದೇ ಆದಲ್ಲಿ 2020 ಜೂ.15ರ ಗಾಲ್ವಾನ್ ಘರ್ಷಣೆಯ ಬಳಿಕ ಭಾರತಕ್ಕೆ ಭೇಟಿ ನೀಡುತ್ತಿರುವ ಚೀನಾದ ಮೊದಲ ನಾಯಕ ಎನಿಸಿಕೊಳ್ಳಲಿದ್ದಾರೆ.
ಕೆಲವು ದಿನಗಳ ಹಿಂದೆ ವಾಂಗ್ ಯೀ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, ಭಾರತ-ಚೀನಾದ ನಡುವೆ ಹುಳಿ ಹಿಂಡಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ.
ಉಭಯ ದೇಶಗಳು ಪರಸ್ಪರ ಘರ್ಷಣೆಯಲ್ಲಿ ತೊಡಗದೇ ಒಗ್ಗಟ್ಟಾಗಿ ಹೋದರೆ ಪರಸ್ಪರ ಏಳಿಗೆ ಸಾಧ್ಯ ಎಂದಿದ್ದರು. ಅವರ ಈ ಮಾತಿನ ಬಳಿಕ ಭಾರತ ಭೇಟಿಯ ಸುದ್ದಿಯೂ ಹರಿದಾಡುತ್ತಿದೆ.