ದೆಹಲಿ, ಮಾ 15 (DaijiworldNews/HR): ಸರ್ಕಾರದ ತಪ್ಪು ನೀತಿಗಳ ಪರಿಣಾಮಗಳನ್ನು ಸಾಮಾನ್ಯ ನಾಗರಿಕರು ಎದುರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಇಡೀ ದೇಶದಲ್ಲಿ ಹಣದುಬ್ಬರ ಗಗನಕ್ಕೆ ಏರಿದ್ದು, ಸರ್ಕಾರದ ತಪ್ಪು ನೀತಿಗಳ ಪರಿಣಾಮಗಳನ್ನು ಸಾಮಾನ್ಯ ನಾಗರಿಕರು ಎದುರಿಸುತ್ತಿದ್ದಾರೆ ಎಂದರು.
ಇನ್ನು ಎಫ್ ಡಿ - 5.1 ಶೇಕಡಾ, ಪಿಪಿಎಫ್ - 7.1 ಶೇಕಡಾ, ಇಪಿಎಫ್ - 8.1 ಶೇಕಡಾ, ಚಿಲ್ಲರೆ ಹಣದುಬ್ಬರ - 6.07 ಶೇಕಡಾ, ಸಗಟು ಹಣದುಬ್ಬರ - 13.11 ಶೇಕಡಾ. ಜನರಿಗೆ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ, ಅನಿಲ, ತೈಲ ಮತ್ತು ಇತರ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಇದು ಭಾರತದಲ್ಲಿ ಪ್ರಭಾವ ಬೀರುತ್ತಿದೆ. ಆದರೆ ಕೇಂದ್ರ ಸರ್ಕಾರ ಹಣದುಬ್ಬರ ನಿಯಂತ್ರಣಕ್ಕೆ ಹಲವು ದೃಢ ಕ್ರಮಗಳನ್ನು ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.