ನವದೆಹಲಿ, ಮಾ 15 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ತೀರ್ಪಿನಲ್ಲಿ ರಾಜಕೀಯ ಲಾಭದ ಯೋಚನೆ ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ರಾಜ್ಯ ಸರ್ಕಾರವು ಹಿಜಾಬ್ ವಿಚಾರ ನಿಭಾಯಿಸುವಲ್ಲಿ ಆರಂಭದಲ್ಲೇ ವಿಫಲವಾಗಿದೆ. ತೀರ್ಪಿನಲ್ಲಿ ರಾಜಕೀಯ ಲಾಭದ ಯೋಚನೆ ಬೇಡ. ವೈಯಕ್ತಿಕತೆಗಿಂತ ಎಲ್ಲರೂ ತೀರ್ಪು ಒಪ್ಪುವುದು ಸೂಕ್ತ ಎಂದಿದ್ದಾರೆ.
ಇನ್ನು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯವಾಗಿ ಹೆಣ್ಣು ಮಕ್ಕಳು ಶಿಕ್ಷಣದ ಕುರಿತಾಗಿ ಯೋಚಿಸಬೇಕು. ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡುವುದು ಉತ್ತಮ ಎಂದು ಹೇಳಿದ್ದಾರೆ.