ನವದೆಹಲಿ, ಮಾ 15 (DaijiworldNews/HR): ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ಮಹತ್ವದ ತೀರ್ಪ ನೀಡಿದ್ದು, ಉರ್ದು ಶಾಲೆಗಳಲ್ಲಿಯೂ ಕಾನೂನು ಪಾಲನೆ ಮಾಡಲೇ ಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪ ನೀಡಿದ್ದು, ನಾಳೆಯಿಂದ ಆಯಾ ಶಾಲೆಗಳು ಸೂಚನೆ ನೀಡಿರುವ ಸಮವಸ್ತ್ರವನ್ನು ಧರಿಸಿ ನಾಳೆಯಿಂದ ಶಾಲೆಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸುಮಾರು 80 ಸಾವಿರಕ್ಕೂ ಅಧಿಕ ಮುಸ್ಲಿಂ ಹೆಣ್ಣು ಮಕ್ಕಳು ಅಭ್ಯಾಸ ನಡೆಸುತ್ತಿದ್ದು, ಕೇಂದ್ರ ಸರ್ಕಾರ ತಂದಿರುವ ಯೋಜನೆಗಳಿಂದ ಅವರಿಗೆ ಅನೂಕೂಲವಾಗಿದೆ, 80 ಸಾವಿರದ ಮಕ್ಕಳಲ್ಲಿ ಕೆಲವೇ ಮಕ್ಕಳುಗಳು ಹಿಜಾಬ್ ಧರಿಸುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ, ಇಂತಹ ಮಕ್ಕಳಿಗೆ ನಾನು ಶಾಲೆಗೆ ಬರುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇನ್ನು ನಾವು ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಇನ್ನೂ ಸುಪ್ರಿಂಕೋರ್ಟ್ ತೀರ್ಪಿನ ವಿರುದ್ದ ಹೋಗುವ ವಿದ್ಯಾರ್ಥಿಗಳಿಗೆ ಸಂವಿಧಾನದತ್ತವಾಗಿದೆ. ಸದ್ಯಕ್ಕೆ ಹೈಕೋರ್ಟ್ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.