ಉತ್ತರ ಪ್ರದೇಶ, ಮಾ 15 (DaijiworldNews/DB): ಐದು ವರ್ಷದ ಬಾಲಕನೋರ್ವ ಗಾಳಿಪಟ ಹಾರಿಸುತ್ತಿದ್ದ ವೇಳೆ ಗಾಳಿಪಟದ ದಾರದಿಂದ ತುಂಡಾಗಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುದಾಘಾತಗೊಂಡು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಿಜನೂರುವಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಾಲಕ ಇಲ್ಲಿನ ನಾಗಿನ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಆಟವಾಡುತ್ತಿದ್ದ. ಈ ವೇಳೆ ದಾರದಿಂದ ತುಂಡಾಗಿದ್ದ ವಿದ್ಯುತ್ ತಂತಿ ತಗುಲಿದೆ. ವಿದ್ಯುತ್ ಸ್ಪರ್ಶವಾಗುತ್ತಿದ್ದಂತೆ ಗಂಭೀರ ಗಾಯಗಳಾಗಿದ್ದು, ತತ್ ಕ್ಷಣ ಸ್ಥಳೀಯ ವೈದ್ಯರಲ್ಲಿಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
ಚೀನಾ ನಿರ್ಮಿತ ಗಾಳಿಪಟಗಳು ಇತ್ತೀಚಿನ ದಿನಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದರೆ ಬಾಲಕ ಚೀನಾ ನಿರ್ಮಿತ ಗಾಳಿಪಟದೊಂದಿಗೆ ಆಡುತ್ತಿದ್ದನೇ ಎಂಬುದು ತಿಳಿದು ಬಂದಿಲ್ಲ.