ನವದೆಹಲಿ, ಮಾ 15 (DaijiworldNews/HR): ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು, ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಅಲ್ಲ, ಎಂಬ ಹೈಕೋರ್ಟ್ ತೀರ್ಪು ಧರ್ಮ, ಸಂಸ್ಕೃತಿ, ಅಭಿವ್ಯಕ್ತಿ ಮತ್ತು ಕಲೆಯಂತಹ ಮೂಲಭೂತ ಹಕ್ಕುಗಳನ್ನ ಉಲ್ಲಂಘಿಸುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹೈಕೋರ್ಟ್ ನೀಡಿರುವ ಹಿಜಾಬ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಅವರು 'ಹೈಕೋರ್ಟ್ ತೀರ್ಪುಧರ್ಮ, ಸಂಸ್ಕೃತಿ, ಅಭಿವ್ಯಕ್ತಿ ಮತ್ತು ಕಲೆಯಂತಹ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ
ಇನ್ನು ಇದು ಮುಸ್ಲಿಂ ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಧುನಿಕತೆ ಎಂದರೆ ಧಾರ್ಮಿಕ ಆಚರಣೆಗಳನ್ನ ತ್ಯಜಿಸುವುದಲ್ಲ. ಒಬ್ಬರು ಹಿಜಾಬ್ ಧರಿಸಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.