ಬೆಂಗಳೂರು, ಮಾ 15 (DaijiworldNews/DB): ಹಿಜಾಬ್ ವಿವಾದ ಸಂಬಂಧಿಸಿ ಕೋರ್ಟ್ ನೀಡಿರುವ ಆದೇಶವನ್ನು ನಾವು ಪಾಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಈ ಹಿಂದೆಯೂ ಹಿಜಾಬ್ ಧರಿಸಿಸುತ್ತಿದ್ದರು. ಮುಂದೆಯೂ ಸಮಸ್ಯೆ ಇಲ್ಲ ಎಂದಿದ್ದೆ. ಆದರೆ, ಇದೀಗ ಕೋರ್ಟ್ ನೀಡಿರುವ ತೀರ್ಪುನ್ನು ನಾವು ಪಾಲಿಸಬೇಕು ಎಂದರು.
ಕೋರ್ಟ್ ತೀರ್ಪು ಪಾಲನೆ ಮಾಡಬೇಕು. ಆದರೆ, ಈ ತೀರ್ಪು ಬಂದ ಬಳಿಕ ಇದರಿಂದ ನಮಗೆ ಕಪಾಳಮೋಕ್ಷವಾಗಿದೆ ಎಂದರ್ಥವಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.