ದೆಹಲಿ, ಮಾ 15 (DaijiworldNews/HR): ಕೇಂದ್ರ ರಸ್ತೆ ಸಾರಿಗೆ ಮತ್ತು ರಸ್ತೆಗಳ ಸಚಿವಾಲಯವು 15 ವರ್ಷಗಳಿಗಿಂತ ಹಳೆಯದಾದ ವಾಹನ ನೋಂದಣಿ ಪ್ರಮಾಣ ಪತ್ರಗಳ ನವೀಕರಣದ ಶುಲ್ಕವನ್ನು ಏಪ್ರಿಲ್ 1 ರಿಂದ ಹೆಚ್ಚಿಸಲಿದೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಕೇಂದ್ರ ರಸ್ತೆ ಸಾರಿಗೆ ಮತ್ತು ರಸ್ತೆಗಳ ಸಚಿವಾಲಯದ ಆದೇಶದ ಪ್ರಕಾರ, ಈಗಾಗಲೇ ಚಾಲ್ತಿಯಲ್ಲಿರುವ ಹಳೆ ಬೆಲೆಗಿಂತ 8 ಪಟ್ಟು ಹೆಚ್ಚು ಹೊಸ ದರ ನಿಗದಿಯಾಗುವ ಸಾಧ್ಯತೆ ಇದ್ದು, ಈ ಹೆಚ್ಚಿದ ಬೆಲೆಗಳು ಏಪ್ರಿಲ್ನಿಂದ ಜಾರಿಗೆ ಬರುತ್ತವೆ ಎಂದಿದೆ.
ಹೊಸ ನಿಯಮಗಳ ಪ್ರಕಾರ, ಏಪ್ರಿಲ್ 1 ರಿಂದ 15 ವರ್ಷಗಳ ಹಳೆಯ ಕಾರನ್ನು ನವೀಕರಿಸಲು ರೂ. 5000 ಪಾವತಿಸಬೇಕು. ಈ ಹಿಂದೆ ಈ ವೆಚ್ಚ ಕೇವಲ ರೂ. 600 ಆಗಿತ್ತು. ಅದೇ ದ್ವಿಚಕ್ರ ವಾಹನಗಳಿಗೆ ರೂ. 300 ಪಾವತಿಸಬೇಕಾಗಿದ್ದರೂ, ಪ್ರಸ್ತುತ ರೂ. 1000 ಖರ್ಚಾಗುತ್ತದೆ. ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಕಾರುಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಿದೆ.
ಆದರೆ ದೆಹಲಿಯಲ್ಲಿ 10 ರಿಂದ 15 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮರು ನೋಂದಣಿಗೆ ಹೊಸ ನಿಯಮಗಳು ಅನ್ವಯಿಸುವುದಿಲ್ಲ.