ರಾಮನಗರ, ಮಾ 07 (DaijiworldNews/HR): ಎಚ್ ಡಿ ಕುಮಾರಸ್ವಾಮಿಯವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಹೋಟೆಲ್ನಲ್ಲಿ ರಾಸಲೀಲೆ ಆಡಿಕೊಂಡಿದ್ದರು ಎಂದು ಹೇಳಿದ್ದ ಬಿಜೆಪಿ ಎಂಎಲ್ಸಿ ಸಿ.ಪಿ. ಯೋಗೇಶ್ವರ್ ವಿರುದ್ದ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ 14 ತಿಂಗಳ ಸಿಎಂ ಆಗಿದ್ದಂತ ಸಂದರ್ಭದಲ್ಲಿ ಚೆನ್ನಪಟ್ಟಣಕ್ಕೆ ಬರ್ತಾನೇ ಇರಲಿಲ್ಲ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ರಾಸಲೀಲೆ ಆಡಿಕೊಂಡಿದ್ದರು. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ರಾಸಲೀಲೆ ಆಡಿಕೊಂಡಿದ್ದ ಸಂಧರ್ಭದಲ್ಲಿ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು, ನಾಟಕ ಮಾಡ್ತಾ ಇದ್ದಾರೆ ಎಂದು ಯೋಗೇಶ್ವರ್ ಬಾಂಬ್ ಸಿಡಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ, ತಾಜ್ ವೆಸ್ಟೆಂಡ್ನಲ್ಲಿ ರಾಸಲೀಲೆ ಮಾಡಲು ಹೋಗ್ತಿರಲಿಲ್ಲ. ಸರ್ಕಾರಿ ಬಂಗಲೆ ಇರಲಿಲ್ಲ, ಹಾಗಾಗಿ ರೆಸ್ಟ್ ಮಾಡಲು ಹೋಗ್ತಿದ್ದೆ. ಈಗಲೂ ತಾಜ್ ವೆಸ್ಟ್ ಹೋಟೆಲಿಗೆ ಹೋಗ್ತೀನಿ. ನನ್ನದು ತೆರೆದ ಪುಸ್ತಕ. ನನ್ನ ಪಿಎಗಳು ಈಗಲೂ ಇರ್ತಾರೆ. ಸಾ.ರಾ ಮಹೇಶ್ ಇರ್ತಿದ್ರು ಎಂದಿದ್ದಾರೆ.''
ನಾನು ರಾಜಕೀಯಕ್ಕೆ ಬಂದಾಗ ಯೋಗೇಶ್ವರ್ ಚಡ್ಡಿ ಹಾಕಿದ್ನೋ ಇಲ್ವೋ , ಆದರೆ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಅಗಿನಿಂದಲೂ ಇದೆ. ಓಪನ್ ಚರ್ಚೆಗೆ ನಾನು ಸಿದ್ದ, ಬರಲಿ ಯಾವ ವಿಚಾರ ಚರ್ಚೆ ಮಾಡ್ತಾರೋ ನೋಡೋನಾ ಎಂದು ಸವಾಲಾಕಿದ್ದಾರೆ.
ಇನ್ನು ಇವನು ಗುಡಿಸಲಲ್ಲಿ ಇದ್ದನಾ? ಇಲ್ಲೆ ಯು.ಬಿ. ಸಿಟಿ ಪಕ್ಕದಲ್ಲಿ ಇದ್ನಲ್ಲ. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ, ನಾನು ಕಣ್ಣೀರು ಹಾಕ್ಕೊಂಡ್ ಹೋಗಿಲ್ಲ. ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಅಲ್ಲ, ಇಡೀ ರಾಜ್ಯಕ್ಕೆ ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ, ಆರಿಸಿರೋ ಜನರು ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.