ನವದೆಹಲಿ, ಮಾ 14 (DaijiworldNews/HR): ದೇಶದಲ್ಲಿ 15 ರಿಂದ 18ನೇ ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಇದೀಗ ದೇಶಾದ್ಯಂತ ಮಾರ್ಚ್ 16ರರಿಂದ 12-14ನೇ ವಯಸ್ಸಿನ ಎಲ್ಲಾ ಮಕ್ಕಳಿಗೆ ಕಾರ್ಬೆವಾಕ್ಸ್ ಕೊರೋನಾ ಲಸಿಕೆ ನೀಡೋದಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯಾ ಮಾಹಿತಿ ಹಂಚಿಕೊಂಡಿದ್ದು,12-14 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆಯನ್ನು ಮಾರ್ಚ್ 16 ರಿಂದ ಪ್ರಾರಂಭವಾಗಲಿದೆ. ಅಲ್ಲದೇ 60 ವರ್ಷ ಮೇಲ್ಪಟ್ಟ ಎಲ್ಲರಿಗೂ 'ಮುನ್ನೆಚ್ಚರಿಕೆ ಡೋಸ್' ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು 15-18 ವರ್ಷದ ಮಕ್ಕಳಿಗೆ ಈಗಾಲೇ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದ್ದು, ಇದೀಗ ಮಾರ್ಚ್ 16ರಿಂದ 12-14 ವರ್ಷದ ಮಕ್ಕಳಿಗೆ ಜೈವಿಕ ಇ ಯ ಕಾರ್ಬೆವಾಕ್ಸ್ಲಸಿಕೆಯನ್ನು ನೀಡಲಾಗುತ್ತಿದೆ.