ರಾಮನಗರ, ಮಾ 14 (DaijiworldNews/HR): ಹೆಚ್ ಡಿ ಕುಮಾರಸ್ವಾಮಿಯವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಹೋಟೆಲ್ನಲ್ಲಿ ರಾಸಲೀಲೆ ಆಡಿಕೊಂಡಿದ್ದರು. ಆ ಬಗ್ಗೆ ಅವರನ್ನೇ ಕೇಳಿ ಎಂದು ಎಂಎಲ್ಸಿ ಸಿಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನಿಂದ ಯಾಕೆ ಕುಮಾರಸ್ವಾಮಿ ಬಗ್ಗೆ ಕೇಳುತ್ತೀರಿ.? ನೇರಾ-ನೇರಾ ನನ್ನ ಮುಂದೆ ಕೂರಿಸಿ, ಆಗ ಸಾರ್ವಜನಿಕವಾಗಿಯೇ ವಿಚಾರಗಳನ್ನು ಮಾತನಾಡೋಣ ಎಂದರು.
ಇನ್ನು ಕುಮಾರಸ್ವಾಮಿ 14 ತಿಂಗಳ ಸಿಎಂ ಆಗಿದ್ದಂತ ಸಂದರ್ಭದಲ್ಲಿ ಚೆನ್ನಪಟ್ಟಣಕ್ಕೆ ಬರ್ತಾನೇ ಇರಲಿಲ್ಲ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ರಾಸಲೀಲೆ ಆಡಿಕೊಂಡಿದ್ದರು ಎಂದಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿಯೇ ರಾಸಲೀಲೆ ಆಡಿಕೊಂಡಿದ್ದ ಸಂಧರ್ಭದಲ್ಲಿ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು, ನಾಟಕ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.