ಭೋಪಾಲ್, ಮಾ 14 (DaijiworldNews/HR): ಮಾಜಿ ಕೇಂದ್ರ ಸಚಿವೆ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ಮದ್ಯದಂಗಡಿಗಳ ನಿಷೇಧಕ್ಕೆ ಆಗ್ರಹಿಸುತ್ತಿದ್ದು, ಇದೀಗ ಅವರು ಭೋಪಾಲ್ನಲ್ಲಿ ಮದ್ಯದಂಗಡಿಗೆ ಕಲ್ಲು ಎಸೆದು ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ.
ಮದ್ಯದಂಗಡಿಗೆ ಕಲ್ಲು ಎಸೆದು ಧ್ವಂಸಗೊಳಿಸಿರುವ ವಿಡಿಯೋವನ್ನು ಟ್ವೀಟರಿನಲ್ಲಿ ಹಂಚಿಕೊಂಡಿರುವ ಉಮಾಭಾರತಿ, ಅನೇಕ ಮದ್ಯದ ಅಂಗಡಿಗಳು ಬರ್ಖೇಡಾ ಪಠಾನಿ ಪ್ರದೇಶದಲ್ಲಿರುವ ಕಾರ್ಮಿಕರ ಕಾಲೋನಿಯಲ್ಲಿದ್ದು, ಈ ಅಂಗಡಿಗಳಲ್ಲಿ ಕೂಲಿ ಕಾರ್ಮಿಕರ ಹಣ ಪೋಲಾಗುತ್ತದೆ. ಸರಕಾರದ ನೀತಿಗೆ ವಿರುದ್ಧವಾಗಿ ಮದ್ಯದಂಗಡಿ ಇರುವುದರಿಂದ ಇಲ್ಲಿನ ನಿವಾಸಿಗಳು, ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ, ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದರು.
ಇನ್ನು ಮಧ್ಯದಂಗಡಿಯನ್ನು ಒಂದು ವಾರದಲ್ಲಿ ಮುಚ್ಚುವಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ ಎಂದಿರುವ ಅವರು, ಮದ್ಯದಂಗಡಿಗಳ ಹೊರಗೆ ಪ್ರತಿಭಟನೆ ನಡೆಸುವುದಾಗಿ ಈ ಹಿಂದೆ ಘೋಷಿಸಿದ್ದರು.