ಮುಂಬಯಿ, ಮಾ 13 (DaijiworldNews/HR): ಎನ್ಸಿಪಿ ಮುಖ್ಯಸ್ಥ ಶರಾದ್ ಪವಾರ್ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ, ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಹಾಗೂ ಅವರ ಸಹೋದರ ನಿಲೇಶ್ ರಾಣೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಎನ್ಸಿಪಿ ಕಾರ್ಯಕರ್ತ ಶ್ರೀನಿವಾಸ್ ಅಲಿಯಾಸ್ ವೆಂಕಟರಾವ್ ಚವನ್ ಎಂಬುವವರು ದೂರು ನೀಡಿದ್ದು, ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮಹಾರಾಷ್ಟ್ರದ ಸಚಿವ ಮತ್ತು ಎನ್ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದರೂ ಅವರ ರಾಜೀನಾಮೆಯನ್ನು ಪವಾರ್ ಯಾಕೆ ಪಡೆದಿಲ್ಲ ಎಂದು ಪ್ರಶ್ನಿಸಿರುವ ನಿತೇಶ್ ರಾಣೆ, 'ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆ ಶರದ್ ಪವಾರ್ ಅವರಿಗೆ ಸಂಬಂಧ ಇರಬಹುದು ಎಂದು ಆರೋಪಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.