ನವದೆಹಲಿ, ಮಾ 13 (DaijiworldNews/DB): ಉಕ್ರೇನ್ ನಲ್ಲಿ ರಷ್ಯಾ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ರಾಯಭಾರ ಕಚೇರಿಯು ತಾತ್ಕಾಲಿಕವಾಗಿ ಉಕ್ರೇನ್ ನಿಂದ ಪೋಲೆಂಡ್ಗೆ ಸ್ಥಳಾಂತರಗೊಳ್ಳಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟನೆ ಹೊರಡಿಸಿದೆ.
ಉಕ್ರೇನ್ ನ ಎಲ್ಲಾ ಭಾಗಗಳಲ್ಲಿಯೂ ದಾಳಿ ನಡೆಯುತ್ತಿದ್ದು, ಪಶ್ಚಿಮ ಭಾಗದಲ್ಲಿಯೂ ದಾಳಿಯಾಗುತ್ತಿದೆ. ಇದರಿಂದ ಭದ್ರತೆಗೂ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.