ರಾಮನಗರ, ಮಾ 13 (DaijiworldNews/DB): ನನ್ನ ಕ್ಷೇತ್ರಕ್ಕೆ ನಾನು ಬರಲು ಯಾರ ಅನುಮತಿ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ. ರಾಮನಗರಕ್ಕೆ ನಾನು ಕೊಟ್ಟಿರುವ ಕೊಡುಗೆ ಸಾಕಷ್ಟಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದ ಅವ್ವೇರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಆಲಿಬಾಬಾ 40 ಮಂದಿ ಕಳ್ಳರು ಅಂದ ಹಾಗೆ ಕೆಲವರು ಆವರಿಸಿಕೊಂಡಿದ್ದಾರೆ. ನಾನು ಜನರ ರಕ್ಷಣೆಗಾಗಿ ಬಂದಿದ್ದೇನೆಯೇ ಹೊರತು ಯಾರ ಆಸ್ತಿ ಲೂಟಿ ಮಾಡಲು ಬಂದಿಲ್ಲ. ಯೋಗೇಶ್ವರ್ ಸುಳ್ಳು ದಾಖಲೆ ಸೃಷ್ಟಿಸಿ ಯಾರ್ಯಾರ ಜಮೀನು ಬರೆಸಿಕೊಂಡಿದ್ದಾರೆ ಎಂದು ಗೊತ್ತಿದೆ. ವಿಧಾನಸೌಧದಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸವಾಲೆಸೆದರು.
ಇದೇ ವೇಳೆ ಸಂಸದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಡಿ.ಕೆ. ಸುರೇಶ್ ನನ್ನ ತಂಟೆಗೆ ಬರುವುದು ಬೇಡ ಎಂದರು.