ರಾಯಚೂರು, ಮಾ 13 (DaijiworldNews/HR): ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿದ್ದರೂ ಸಿದ್ಧರಾಮಯ್ಯಗೆ ಮಾತ್ರ ಇನ್ನೂ ಸೊಕ್ಕು ಇಳಿದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರು ತಮ್ಮ ಹಿಂದೆ ಕುರುಬ ಸಮಾಜವಿದೆ ಜೊತೆಗೆ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ಧರಾಮಯ್ಯನವರದ್ದು ಉತ್ತರನ ಪೌರುಷವಿದ್ಧಂತೆ ಎಂದಿದ್ದಾರೆ.
ಇನ್ನು ಎಲ್ಲಾ ಚುನಾವಣೆಯಲ್ಲಿ ಸೋತರು ಸಿದ್ಧರಾಮಯ್ಯ ಅವರ ಸೊಕ್ಕು ಇನ್ನೂ ಇಳಿದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡೋದಕ್ಕೆ ಕಾರ್ಯಕರ್ತರಿಲ್ಲ. ಹೀಗಾಗೇ ಸದಸ್ಯತ್ವಕ್ಕೂ ಮೊಬೈಲ್, ಪ್ರಿಡ್ಜ್ ಕೊಡುತ್ತೇವೆ ಎಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.