ಹುಬ್ಬಳಿ, ಮಾ 13 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗೋವಾ ವಿಧಾನಸಭಾ ಚುನಾವಣೆ ಪ್ರಕಟವಾಗೋ ಗೋವಾಕ್ಕೆ ಮೊದಲೇ ಹೋಗಿದ್ದೇಕೆ? ಅವರೇನು ತೋಳುಬಲ, ಗೂಂಡಾಗಿರಿ ಮಾಡೋದಕ್ಕೆ ಹೋಗಿದ್ದರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಗೋವಾಕ್ಕೆ ಹಾಗೂ ಉತ್ತರಾಖಂಡಕ್ಕೆ 13 ವೀಕ್ಷಕರು ಬಂದಿದ್ದರು. ಚುನಾವಣೆಯನ್ನು ಕಾಂಗ್ರೆಸ್ ಕುಸ್ತಿಯ ಕಣ, ಡಬ್ಲ್ಯುಡಬ್ಲ್ಯುಎಫ್ ಎಂದುಕೊಂಡಿದೆಯಾ? ಜನ ತೀರ್ಪು ಕೊಡುವ ಮುನ್ನವೇ ಇವರು ಅಲ್ಲಿಗೆ ತೆರಳಿದ್ದಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಕಾಂಗ್ರೆಸ್ ನಡೆಯಾಗಿದೆ ಎಂದರು.
ಇನ್ನು ಫಲಿತಾಂಶ ಬರುವ ಮುನ್ನವೇ ಅಲ್ಲಿಗೆ ಹೋಗಿ ಗೂಂಡಾಗಿರಿ ಮಾಡಲು ಡಿಕೆ ಶಿವಕುಮಾರ್ ತಯಾರಿ ಮಾಡಿದ್ದರೆ. ಕಾಂಗ್ರೆಸ್ ನ ಈ ನಡೆ ಗೊತ್ತಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ವೀಕ್ಷಕರು ಫಲಿತಾಂಶಕ್ಕೂ ಮುನ್ನಾ ಗೋವಾ, ಉತ್ತರಾಖಂಡಕ್ಕೆ ಯಾಕೆ ಹೋಗಿದ್ದರು ಎನ್ನುವುದೇ ಇನ್ನೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.