ಚಿತ್ರದುರ್ಗ, ಮಾ 13 (DaijiworldNews/DB): ಮುಂದಿನ ಚುನಾವಣೆಯಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವಂತೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕೇಂದ್ರ ಸಚಿವ ಎ. ನಾರಾಯಣಸ್ವಾಮಿಯವರಲ್ಲಿ ಬಹಿರಂಗ ಮನವಿ ಮಾಡಿದ ಪ್ರಸಂಗ ಆನೇಕಲ್ ನಲ್ಲಿ ನಡೆದಿದೆ.
ಇಲ್ಲಿನ ತರಾಸು ರಂಗ ಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನಿಂದ ಶನಿವಾರ ಆಯೋಜಿಸಿದ್ದ ಚಿತ್ರದುರ್ಗ ಜಿಲ್ಲಾ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ. ಶಿವರಾಮ್, ನೀವು ಆನೇಕಲ್ ನಿಂದ ಚಿತ್ರದುರ್ಗಕ್ಕೆ ಬಂದಿದ್ದೀರಿ. ನನಗೆ ಆನೇಕಲ್ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸಿ ಎಂಬುದಾಗಿ ಬಹಿರಂಗವಾಗಿಯೇ ಕೇಳುತ್ತೇನೆ ಎಂದು ಮನವಿ ಮಾಡಿದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ನಾನು ಈ ಬಗ್ಗೆ ಏನೂ ಹೇಳಲು ಬಯಸುವುದಿಲ್ಲ ಎಂದರು.