ನವದೆಹಲಿ, ಮಾ 13 (DaijiworldNews/DB): ಭವಿಷ್ಯದಲ್ಲಿ ಪಂಜಾಬ್ ಗೆ ಬಿಜೆಪಿಯೇ ಏಕೈಕ ಆಯ್ಕೆ. ಆಮ್ ಆದ್ಮಿ ಪಕ್ಷವು ಬಿಜೆಪಿಗೆ ಪರ್ಯಾಯ ಅಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಇಂದೇ ಭವಿಷ್ಯ ನುಡಿಯುತ್ತೇನೆ. ಎಎಪಿ ನಮಗೆಂದೂ ಪರ್ಯಾಯ ಪಕ್ಷವಲ್ಲ ಎಂದರು.
ಐದಾರು ದಶಕಗಳ ಹಿಂದೆ ಕಾಂಗ್ರೆಸ್ ಹುಟ್ಟು ಹಾಕಿದ್ದ ಆಡಳಿತ ವಿರೋಧಿ ಪೀಡೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟು ಹಾಕಿದ ಹೊಸ ರಾಜಕೀಯ ಸಂಸ್ಕೃತಿಯು ತೊಡೆದು ಹಾಕಿದೆ. ಜಾತಿ-ಧರ್ಮ ಆಧಾರದಲ್ಲಿ ಚುನಾವಣೆ ಗೆಲ್ಲುವ ತಂತ್ರಗಳನ್ನು ತಡೆದು ಜನಪರ ವ್ಯವಸ್ಥೆಯನ್ನು ಹುಟ್ಟು ಹಾಕುವ ಮೂಲಕ ಮೋದಿಯವರು ಜನರ ವಿಶ್ವಾಸ ಗಳಿಸಿದ್ದಾರೆ ಎಂದು ತಿಳಿಸಿದರು.