ಆಂಧ್ರಪ್ರದೇಶ, ಮಾ 13 (DaijiworldNews/HR): ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ತಿರುಪತಿ ಸಮೀಪದ ವಿದ್ಯಾನಗರ ಎಂಬಲ್ಲಿ ಹತ್ತು ವರ್ಷದ ಬಾಲಕನೋರ್ವ ತನ್ನ ತಾಯಿ ನಿದ್ರೆ ಮಾಡುತ್ತಿದ್ದಾಳೆ ಎಂದು ಭಾವಿಸಿ ಮೃತ ದೇಹದೊಂದಿಗೆ ನಾಲ್ಕು ದಿನ ಕಳೆದಿರುವ ಘಟನೆ ನಡೆದಿದೆ.
ಮೃತಪಟ್ಟಿರುವ ಮಹಿಳೆಯನ್ನು ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ರಾಜ್ಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ರಾಜ್ಯಲಕ್ಷ್ಮಿ ಅವರು ಎರಡು ವರ್ಷಗಳ ಹಿಂದೆ ಪತಿಯಿಂದ ಪ್ರತ್ಯೇಕವಾಗಿ 5ನೇ ತರಗತಿಯಲ್ಲಿ ಓದುತ್ತಿದ್ದ ಮಗ ಶ್ಯಾಮ್ ಕಿಶೋರ್ ನೊಂದಿಗೆ ವಾಸವಾಗಿದ್ದರು.
ಶ್ಯಾಮ್ ಕಿಶೋರ್ ತನ್ನ ಚಿಕ್ಕಪ್ಪ ದುರ್ಗಾಪ್ರಸಾದ್ಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದ್ದು, ಈ ವೇಳೆ ದುರ್ಗಾಪ್ರಸಾದ್ ಸ್ಥಳಕ್ಕೆ ಬಂದು ನೋಡಿದಾಗ ರಾಜ್ಯಲಕ್ಷ್ಮಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಇನ್ನು ಶ್ಯಾಮ್ ಕಿಶೋರ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ದುರ್ಗಾ ಪ್ರಸಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.