ಚಿಕ್ಕಬಳ್ಳಾಪುರ, ಮಾ 11 (DaijiworldNews/DB): 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಯೋಜನೆಗೆ ಚಿಕ್ಕಬಳ್ಳಾಪುರ ತಾಲೂಕಿನ ಗಂಗೀರ್ಲಹಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು. ಬಳಿಕ ಗ್ರಾಮದ 12 ಮನೆಗಳಿಗೆ ತೆರಳಿ ಕಂದಾಯ ದಾಖಲೆ ನೀಡಿದರು.
ಪೂರ್ಣ ಕುಂಭ ಸ್ವಾಗತೊಂದಿಗೆ ಮುಖ್ಯಮಂತ್ರಿಯವರನ್ನು ಗ್ರಾಮಸ್ಥರು ಬರಮಾಡಿಕೊಂಡರು.
ಬಳಿಕ ಸಿಎಂ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಚಿವರಾದ ಆರ್. ಅಶೋಕ್, ಎಂ.ಟಿ.ಬಿ. ನಾಗರಾಜು, ವಿಧಾನ ಪರಿಷತ್ ಸದಸ್ಯ ವೈ. ಎ. ನಾರಾಯಣಸ್ವಾಮಿ ಅವರು ಮನೆಮನೆಗೆ ತೆರಳಿ ಕಂದಾಯ ದಾಖಲೆ ವಿತರಿಸಿದರು. ಹಳ್ಳಿಕಟ್ಟೆಯಲ್ಲಿ ಜನರೊಂದಿಗೆ ಸಂವಾದ ಆಯೋಜಿಸಲಾಗಿತ್ತು.