ನವದೆಹಲಿ, ಮಾ 12 (DaijiworldNews/HR): ಯುದ್ದಗ್ರಸ್ಥ ಉಕ್ರೆನ್ನಲ್ಲಿ ಸಿಲುಕಿದ್ದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಆರಂಭಿಸಿದ್ದು, ಶುಕ್ರವಾರ ರಾತ್ರಿ ಅಂತಿಮವಾಗಿ ವಿದ್ಯಾರ್ಥಿಗಳು ಭಾರತ ತಲುಪಿದ್ದು, ಆಪರೇಷನ್ ಗಂಗಾ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಫೆಬ್ರವರಿ 27ರಂದು ಆಪರೇಷನ್ ಗಂಗಾ ಆರಂಭವಾಗಿದ್ದು ಇದರಲ್ಲಿ ಇದುವರೆಗೆ ಕರ್ನಾಟಕದ 572 ವಿದ್ಯಾರ್ಥಿಗಳನ್ನು ಒಟ್ಟು 63 ಬ್ಯಾಚ್ ಗಳಲ್ಲಿ ಕರೆ ತರಲಾಗಿದೆ.
ಇನ್ನು ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಪ್ರಕ್ರಿಯೆಗೆ ಆಪರೇಷನ್ ಗಂಗಾ ಎಂದು ಹೆಸರನ್ನಿಡಲಾಗಿದ್ದು, ಒಟ್ಟು 13 ದಿನ ನಡೆದ ಆಪರೇಷನ್ನಲ್ಲಿ ಕರ್ನಾಟಕದ 572 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯಿನಾಡಿಗೆ ಬಂದಿಳಿದಿದ್ದಾರೆ.
ಶುಕ್ರವಾರ ಕೊನೆಯ ಬ್ಯಾಚ್ ವಿದ್ಯಾರ್ಥಿಗಳು ಬೆಂಗಳೂರು ತಲುಪಿದ್ದು, ಎರಡು ಬ್ಯಾಚ್ ನಲ್ಲಿ ಒಟ್ಟು 8 ವಿದ್ಯಾರ್ಥಿಗಳ ಅಗಮಿಸಿದ್ದು, ಉಕ್ರೇನ್ ಭಯಾನಕ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.