ನವದೆಹಲಿ, ಮಾ 12 (DaijiworldNews/MS): ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ಕುಸ್ತಿಪಟು ಸಾಗರ್ ಧನಕರ್ ಕೊಲೆಯ ಶಂಕಿತ ಆರೋಪಿಯಾಗಿ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸುಶೀಲ್ ಕುಮಾರ್ ಅವರು ತಮ್ಮೊಂದಿಗಿರುವ ಸಹ ಕೈದಿಗಳಿಗೆ ಫಿಟ್ನೆಸ್ ಮತ್ತು ಕುಸ್ತಿ ತರಬೇತಿ ನೀಡಲು ಅನುಮತಿ ನೀಡಲಾಗಿದೆ.
"ಆಸಕ್ತ ಕೈದಿಗಳಿಗೆ ಫಿಟ್ನೆಸ್ ಮತ್ತು ಕುಸ್ತಿ ತರಬೇತಿ ನೀಡಲು ನಾವು ಸುಶೀಲ್ ಕುಮಾರ್ ಅವರಿಗೆ ಅವಕಾಶ ನೀಡಿದ್ದೇವೆ, 6-7 ಕೈದಿಗಳು ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಸುಶೀಲ್ ಅವರು ಕಲಿಯಲು ಆಸಕ್ತಿ ಹೊಂದಿರುವ ಕೈದಿಗಳಿಗೆ ತರಬೇತಿ ನೀಡುತ್ತಿದ್ದಾರೆ " ಎಂದು ಕಾರಾಗೃಹದ ಮಹಾನಿರ್ದೇಶಕರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ಕೊಲೆ ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದಾರೆ. ಕಿರಿಯ ಕುಸ್ತಿಪಟುಗಳ ನಡುವೆ ತನ್ನ ಮೇಲುಗೈ ಸಾಧಿಸಲು ಸುಶೀಲ್ ಕುಮಾರ್ ನಡೆಸಿದ ಸಂಚಿನ ಪರಿಣಾಮವೇ ಕ್ರೀಡಾಂಗಣದಲ್ಲಿ ನಡೆದ ಗಲಾಟೆ ಎಂದು ಪೊಲೀಸರು ಪ್ರಾಥಮಿಕ ಚಾರ್ಜ್ ಶೀಟ್ನಲ್ಲಿ ಹೇಳಿದ್ದರು. ಈ ತಿಂಗಳ ಆರಂಭದಲ್ಲಿ ಸುಶೀಲ್ ಕುಮಾರ್ ಅವರ ಜಾಮೀನು ತಿರಸ್ಕರಿಸಲಾಗಿತ್ತು.