ನವದೆಹಲಿ, ಮಾ 11 (DaijiworldNews/DB): ದೇಶದ ಮೊಟ್ಟ ಮೊದಲ ಡ್ರೋನ್ ಶಾಲೆಯು ಗ್ವಾಲಿಯರ್ನಲ್ಲಿ ಮಾರ್ಚ್ 10ರಂದು ಆರಂಭಗೊಂಡಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಡ್ರೋನ್ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಡ್ರೋನ್ ತಂತ್ರಜ್ಞಾನವು ಯುವಕರಿಗೆ ವಿಶೇಷವಾಗಿ ಕಲಿಕೆಗೆ ಹೊಸ ಮಾರ್ಗಗಳು ಮತ್ತು ಅವಕಾಶಗಳನ್ನು ತೆರೆಯುತ್ತದೆ ಎಂದರು.
ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ಕ್ರಾಂತಿಯಾಗಲಿದೆ. ಈ ಉದ್ಯಮದಲ್ಲಿ ಡ್ರೋನ್ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ್ದರಿಂದ ದೊಡ್ಡ ಉದ್ಯೋಗಾವಕಾಶವಿದೆ ಎಂದು ಅಭಿಪ್ರಾಯಪಟ್ಟರು.