ನವದೆಹಲಿ, ಮಾ 10 (DaijiworldNews/DB): ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ, ಪಂಜಾಬ್ ಮೊಗಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಳವಿಕಾ ಎಎಪಿ ವಿರುದ್ಧ ಪರಾಭವಗೊಂಡಿದ್ದಾರೆ.
ಸಮಾಜಸೇವಕಿಯಾಗಿ ಕೆಲಸ ಮಾಡುತ್ತಿರುವ ಮಾಳವಿಕಾ ಅವರ ಗೆಲುವಿಗೆ ಕೆಲಸ, ಜನಪ್ರಿಯತೆ ನೆರವಿಗೆ ಬರಲಿಲ್ಲ. ಎಎಪಿಯ ಡಾ. ಅಮನ್ ದೀಪ್ ಕೌರ್ ಅರೋರಾ ಇಲ್ಲಿ ಜಯಭೇರಿ ಬಾರಿಸಿದ್ದು, ಮಾಳವಿಕಾ ಸುಮಾರು 20000 ಮತಗಳಿಂದ ಸೋತಿದ್ದಾರೆ.