ಪಣಜಿ, ಮಾ 10 (DaijiworldNews/HR): ಮುಂಬರುವ 2024ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಗೋವಾದಲ್ಲಿ ಹಾವು-ಏಣಿ ಆಟ ಮುಂದುವರೆದಿದ್ದು, ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಗೋವಾದ 40 ಸ್ಥಾನಗಳಲ್ಲಿ ಮ್ಯಾಜಿಕ್ ನಂಬರ್ 21 ಆಗಿದ್ದು, ಬಿಜೆಪಿ 18, ಕಾಂಗ್ರೆಸ್ 13 ಆಮ್ ಆದ್ಮಿ 1 ಹಾಗೂ ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆಗಳಿಸಿದ್ದಾರೆ.
ಇನ್ನು ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಹಾವು-ಏಣಿಯಾಟ ಮುಂದುವರೆದಿದೆ. ಮೊದಲು ಬಿಜೆಪಿ, ನಂತರ ಕಾಂಗ್ರೆಸ್ ಮತ್ತೆ ಈಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.