ಹೊಸದಿಲ್ಲಿ, ಮಾ 09 (DaijiworldNews/DB): ಉಕ್ರೇನ್ ನಿಂದ ಹೇಗಾದರೂ ಸ್ವದೇಶಕ್ಕೆ ಹಿಂತಿರುಗಿದರೆ ಸಾಕು ಎಂದು ಅಲ್ಲಿ ಸಿಲುಕಿದ್ದವರು ಕಾಯುತ್ತಿದ್ದರೆ, ಕೇರಳದ ಯುವಕನೊಬ್ಬನಿಗೆ ರೊಮೇನಿಯಾ ಹುಡುಗಿಗೆ ಪ್ರೇಮ ನಿವೇದನೆ ಮಾಡಿಯೇ ಬರುವುದಾಗಿ ಹಠ ಹಿಡಿದು ಕುಳಿತಿದ್ದ.
ರೊಮೇನಿಯಾದಿಂದ ಭಾರತಕ್ಕೆ ಸ್ಥಳಾಂತರಕ್ಕಾಗಿ ಕಾಯುತ್ತಿದ್ದ ವೇಳೆ ಅಲ್ಲೇ ಶಿಬಿರದಲ್ಲಿದ್ದ ರೊಮೇನಿಯನ್ ಹುಡುಗಿ ಸಿಮೋನಾ ಮೇಲೆ ಕೇರಳ ತಿರುವನಂತಪುರ ಮೂಲದ ಯುವಕ ವಿಘ್ನೇಶ್ ಗೆ ಪ್ರೀತಿ ಮೂಡಿದೆ. ಆ ಬಳಿಕ ಆತ ಮೂರು ದಿನಗಳ ಕಾಲ ಸ್ಥಳಾಂತರಗೊಳ್ಳದೆ ಅಲ್ಲೇ ಉಳಿದಿದ್ದಾನೆ. ಪ್ರೇಮ ನಿವೇದನೆ ಮಾಡಿದ ಬಳಿಕವೇ ಭಾರತಕ್ಕೆ ಬರುವುದಾಗಿ ಹೇಳಿಕೊಂಡಿದ್ದು, ಮದುವೆ ಪ್ರಸ್ತಾಪ ಮಾಡಿದ ಬಳಿಕವೇ ವಿಮಾನ ಹತ್ತಿದ್ದಾನೆ ಎಂಬುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ವಿಘ್ನೇಶ್ ಪ್ರೇಮ ನಿವೇದನೆಗೆ ಹುಡುಗಿಯ ಪ್ರತಿಕ್ರಿಯೆ ಏನು ಎಂಬುದು ತಿಳಿದು ಬಂದಿಲ್ಲ. ಆಕೆ ಸಮಯ ಕೇಳಿದ್ದಾಳೆ ಎನ್ನಲಾಗಿದೆ.
ಈ ವಿಚಾರವನ್ನು ಪ್ರಮುಖ ಪತ್ರಕರ್ತರು ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.