ಬೆಂಗಳೂರು, ಮಾ 08 (DaijiworldNews/HR): ಸಿದ್ದರಾಮಯ್ಯನವರೇ, ನೀವು ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಬಿಜೆಪಿಯ ರಾಜ್ಯ ಘಟಕ ಟ್ವೀಟ್ ಮಡಿದ್ದು, ಮಾನ್ಯ ಸಿದ್ದರಾಮಯ್ಯನವರೇ, ನೀವು ಅಧಿಕಾರದುದ್ದಕ್ಕೂ ನಿದ್ದೆ ಮಾಡುತ್ತಾ 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಮಾಡಿ ರಾಜ್ಯವನ್ನೇ ಸಾಲದ ಶೂಲಕ್ಕೇರಿಸಿದ್ದು ಹೇಗೆ ಮರೆಯಲು ಸಾಧ್ಯ? ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಮಾಡದಷ್ಟು ಸಾಲ ಮಾಡಿದ್ದ ನೀವು ಈಗ ಯಾವ ನೈತಿಕತೆ ಇಟ್ಟುಕೊಂಡು ಆಯವ್ಯಯವನ್ನು ಟೀಕಿಸುತ್ತಿದ್ದೀರಿ? ಎಂದಿದೆ.
ಇನ್ನು 2013 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೇವಲ 22 ತಿಂಗಳಿನಲ್ಲಿ 39,161 ಕೋಟಿ ಸಾಲ ಮಾಡಿದ್ದರು. ಇದು ಈ ಹಿಂದಿನ ಮುಖ್ಯಮಂತ್ರಿಗಳ ಅಧಿಕಾರಾವಧಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಸಾಲ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು. ಎಂದು ಹೇಳಿದೆ.
ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ? ನಿಮ್ಮ ಬಣವನ್ನು ಡಿಕೆಶಿ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ? ಅಥವಾ ಒಳ ಜಗಳ ಅನಾವರಣವಾದರೆ ಜನರು ತಿರಸ್ಕರಿಸಬಹುದೆಂಬ ಆತಂಕವೋ?’ ಎಂದಿದೆ.