ನವದೆಹಲಿ, ಮಾ 08 (DaijiworldNews/MS): ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮ (ಪಿಎಂ-ಎಸ್ವೈಎಂ) ಯೋಜನೆಯಡಿಯಲ್ಲಿ ಕಾರ್ಮಿಕರ ಪಿಂಚಣಿ ನಿಧಿಗೆ ಕೊಡುಗೆ ನೀಡಲು ಕೇಂದ್ರ ಸರ್ಕಾರ 'ಡೊನೇಟ್-ಎ-ಪೆನ್ಷನ್' ಯೋಜನೆ ಆರಂಭಿಸಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಪ್ರಧಾನಮಂತ್ರಿ ಶ್ರಮ್ ಅಡಿಯಲ್ಲಿ ‘ದಾನ-ಎ-ಪಿಂಚಣಿ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ. ಆ ಬಳಿಕ ಟ್ವೀಟ್ ಮಾಡಿರುವ ಸಚಿವರು, "ತೋಟಗಾರನಿಗೆ ದೇಣಿಗೆ ನೀಡುವ ಮೂಲಕ ನನ್ನ ನಿವಾಸದಲ್ಲಿ ‘ದಾನ-ಎ-ಪಿಂಚಣಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ" ಎಂದು ಹೇಳಿದ್ದಾರೆ.
ಪಿಎಂ-ಎಸ್ವೈಎಂ ಯೋಜನೆ ಅಡಿಯಲ್ಲಿ 18-40 ವರ್ಷ ವಯಸ್ಸಿನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಅವರ ವಯಸ್ಸಿನ ಆಧಾರದ ಮೇಲೆ ಪ್ರತಿ ವರ್ಷ ಕನಿಷ್ಠ 660 ರಿಂದ 2400 ರೂ.ಇವರ ಹೆಸರಿನಲ್ಲಿ ಠೇವಣಿ ಮಾಡಲಾಗುತ್ತದೆ. 60 ವರ್ಷ ವಯಸ್ಸು ತಲುಪಿದ ನಂತರ ಇವರ ತಿಂಗಳಿಗೆ 3,000 ರೂಪಾಯಿಗಳ ಕನಿಷ್ಠ ್ಪಿಂಚಣಿ ಪಡೆಯಲಿದ್ದಾರೆ.
'ಡೊನೇಟ್-ಎ-ಪೆನ್ಷನ್' ಕಾರ್ಯಕ್ರಮವು ಕಾರ್ಮಿಕ ಸಚಿವಾಲಯದ ಅನೇಕ ಉಪಕ್ರಮಗಳ ಭಾಗವಾಗಿದ್ದು, ಇಂದಿನಿಂದ ಮಾರ್ಚ್ 13 ರವರೆಗೆ 'ಐಕಾನಿಕ್ ವೀಕ್' ಹೆಸರಿನಲ್ಲಿ ಇಲಾಖೆ ಆಚರಿಸುತ್ತಿದೆ. ಇ-ಶ್ರಾಮ್ ಅಡಿಯಲ್ಲಿ 25 ಕೋಟಿ ಮಂದಿ ನೋಂದಣಿ ಮಾಡಿಸುವ ಉದ್ದೇಶ ಹೊಂದಿದೆ.
ಕಾರ್ಮಿಕ ಸಚಿವಾಲಯವು ಟ್ವೀಟ್ನಲ್ಲಿ, " ಪಿಂಚಣಿ ಯೋಜನೆಗೆ ದಾನ ನೀಡಿ , ಸಣ್ಣ ಕೊಡುಗೆ ನೀಡುವ ಮೂಲಕ ಅಸಂಘಟಿತ ಕಾರ್ಮಿಕರ ಭವಿಷ್ಯವನ್ನು ಸುರಕ್ಷಿತಗೊಳಿಸಿ, PM-SYM ಅಡಿಯಲ್ಲಿ ಇಂದು ಪ್ರಾರಂಭಿಸಲಾದ ಯೋಜನೆಯಾಗಿದ್ದು , ಸಣ್ಣ ಕೊಡುಗೆ ಮೂಲಕ ದೊಡ್ಡ ಬದಲಾವಣೆಯನ್ನು ಮಾಡಿ" ಎಂದು ಬರೆಯಲಾಗಿದೆ.