ನವದೆಹಲಿ, ಮಾ 08 (DaijiworldNews/MS): 1999 ರಲ್ಲಿ ಏರ್ ಇಂಡಿಯಾ ವಿಮಾನ IC-814 ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ ಅಲಿಯಾಸ್ ಝಾಹಿದ್ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.
ಮಾರ್ಚ್ 1 ರಂದು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯ ಪರಿಣಾಮ ಆತನ ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮುಸುಕು ಧರಿಸಿದ್ದ ದಾಳಿಕೋರರು ಬೈಕ್ನಲ್ಲಿ ಸಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಭಯೋತ್ಪಾದಕ ಸಂಘಟನೆ ಜೈಶ್-ಎ-ಮುಹಮ್ಮದ್ ಜೊತೆ ಸಂಬಂಧ ಹೊಂದಿದ್ದ ಜಹೂರ್ ಮಿಸ್ತ್ರಿ, ಉದ್ಯಮಿಯಂತೆ ಎಂಬಂತೆ ನಟಿಸಿ ತನ್ನ ಹಿನ್ನಲೆ ಮುಚ್ಚಿಟ್ಟುಕೊಂಡಿದ್ದ.
1999 ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನದ ಅಪಹರಣ ಭಯೋತ್ಪಾದಕರನ್ನು ಬಿಡುಗಡೆ ಮಾಡಲೆಂದು ರೂಪಿಸಲಾಗಿತ್ತು. ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ಮುಖಸ್ಥ ಮೌಲಾನಾ ಮಸೂದ್ ಅಜರ್, ಉಗ್ರರ ಸಂಘಟನೆಗಳ ಅಲ್ ಉಮರ್ ಮುಜಾಹಿದೀನ್, ಮುಷ್ತಕ್ ಅಹಮದ್ ಝರ್ಗರ್, ಬ್ರಿಟನ್ ಮೂಲದ ಅಲ್–ಖೈದಾ ಅಹಮದ್ ಓಮರ್ ಸಯೀದ್ ಶೇಖ್ ಅವರನ್ನು ಭಾರತದ ಜೈಲುಗಳಿಂದ ಬಿಡಿಸಿಕೊಳ್ಳಲು ಉಗ್ರರು 1999ರಲ್ಲಿ ಭಾರತದ ಏರ್ ಇಂಡಿಯಾ ವಿಮಾನವನ್ನು ವಶಕ್ಕೆ ಪಡೆದಿದ್ದರು. ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು ಉಗ್ರರು ಏಳು ದಿನಗಳವರೆಗೂ ಒತ್ತೆಯಾಗಿಟ್ಟುಕೊಂಡಿದ್ದರು. ನೇಪಾಳದ ಕಾಠ್ಮಂಡುವಿನಿಂದ ಹಾರಾಟ ಆರಂಭಿಸಿದ್ದ ವಿಮಾನವು ದೆಹಲಿ ತಲುಪಬೇಕಿತ್ತು. ಆದರೆ, ಉಗ್ರರು ವಿಮಾನವನ್ನು ಆಫ್ಗಾನಿಸ್ತಾನದ ಕಂದಹಾರ್ಗೆ ತೆಗೆದುಕೊಂಡು ಹೋಗಿದ್ದರು. ಪಾಕಿಸ್ತಾನ ಸೇನೆಯ ಗುಪ್ತಚರ ಇಲಾಖೆ ಐಎಸ್ಐ ಆ ಕಾರ್ಯಾಚರಣೆಯ ಬೆನ್ನೆಲುಬಾಗಿತ್ತು ಎಂದು ವರದಿಯಾಗಿತ್ತು.