ಬೆಂಗಳೂರು, ಮಾ 08 (DaijiworldNews/MS): ಪೋಷಕರ ವಿರೋಧದ ನಡುವೆ ಪ್ರಿಯಕರ ಜತೆ ಬಂದಿರುವ ತಮಿಳುನಾಡಿನ ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ನಗರದಲ್ಲಿ ಮದುವೆಯಾಗಿದ್ದು ಇದೀಗ ಪೊಲೀಸರ ರಕ್ಷಣೆ ಕೋರಿ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ಹೀಗಾಗಿ ತಮಿಳುನಾಡಿನ ಮಂತ್ರಿ ಮಗಳು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಂತಾಗಿದೆ.
ಕರ್ನಾಟಕದಲ್ಲಿ ಮದುವೆಯಾಗಿದ್ದು, ತಮಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇರುವ ಈ ಜೋಡಿಗೆ ಜೀವಬೆದರಿಕೆ ಇದೆ ಹೀಗಾಗಿ ಕಮಿಷನರ್ ಕಚೇರಿಗೆ ತೆರಳಿದ ಜೋಡಿ ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಕೋರಿಕೊಂಡಿದೆ.
ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಈ ಜೋಡಿಗೆ ಮದುವೆ ಮಾಡಿಸಲಾಗಿದೆ ತಮಿಳುನಾಡು ಪೊಲೀಸರಮೇಲೆ ತಮಗೆ ನಂಬಿಕೆ ಇಲ್ಲವೆಂದು ಕರ್ನಾಟಕ ಪೊಲೀಸರ ಮೊರೆ ಹೋಗಿರುವುದಾಗಿ ಜೋಡಿ ತಿಳಿಸಿದೆ. ತಮಿಳುನಾಡಿಗೆ ಹೋದರೆ ನಮ್ಮನ್ನು ಕೊಲೆ ಮಾಡುತ್ತಾರೆಂದು ಯುವತಿ ಹೇಳಿಕೊಂಡಿದ್ದಾಳೆ.
ತಾನು ಯೂಟ್ಯೂಬ್ ನಲ್ಲಿ ಕನ್ನಡ ಸಂಘಟನೆ ಬಗ್ಗೆ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೆ. ಆಗ ಭರತ್ ಶೆಟ್ಟಿ, ಮಧುಗಿರಿ ಅವರ ಬಗ್ಗೆ ತಿಳಿದು ಅವರನ್ನು ಸಂಪರ್ಕಿಸಿ ಕರ್ನಾಟಕಕ್ಕೆ ಬಂದಿದ್ದೇವೆ. ನನ್ನ ತಂದೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(ವರ ರೈಟ್ ಹ್ಯಾಂಡ್. ತುಂಬಾ ಪವರ್ ಫುಲ್ ಆಗಿರುವ ತನ್ನ ತಂದೆ ಶೇಖರ್ ಬಾಬು ಹೇಳಿದ ಹಾಗೆ ಪೊಲೀಸರು ಕೇಳುತ್ತಾರೆ. ಈಗಾಗಲೇ ಸತೀಶ್ ಕುಮಾರ್ ಮನೆಯವರನ್ನು ಅರೆಸ್ಟ್ ಮಾಡಿದ್ದಾರೆ ಅಂತಾ ಜಯಕಲ್ಯಾಣಿ ಹೇಳಿದ್ದಾರೆ.
ರಕ್ಷಣೆ ಕೋರಿದ ನಮಗೆ ಪೊಲೀಸ್ ಆಯುಕ್ತರು ಭೇಟಿಯಾಗಲು ಸಂಜೆ ಬರಲು ಹೇಳಿದ್ದಾರೆ. ನಾನು ಎಂಬಿಬಿಎಸ್ ಓದಿದ್ದು, ಸತೀಶ್ ಟ್ರಾನ್ಸ್ಪೋರ್ಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಿ ಎಂದು ಜಯಕಲ್ಯಾಣಿ ಬೇಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಚೆನ್ನೈನಲ್ಲಿ ಜಯಕಲ್ಯಾಣಿ ಕಿಡ್ನಾಪ್ ಪ್ರಕರಣ ದಾಖಲಿಸಲಾಗಿದೆ.