ನವದೆಹಲಿ, ಮಾ. 07 (DaijiworldNews/SM): ಉತ್ತರ ಪ್ರದೇಶದ ಚುನಾವಣೆ ಮುಕ್ತಾಯಗೊಂಡಿದೆ. ಈ ಮೂಲಕ ಪಂಚ ರಾಜ್ಯಗಳ ಮತದಾನಕ್ಕೆ ತೆರೆಬಿದ್ದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಆರಂಭಗೊಂಡಿದೆ.
ಹಲವು ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮತದಾರ ಮತ್ತೊಮ್ಮೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಕೈಹಿಡಿಯುವ ಸಾಧ್ಯತೆ ಇದೆ ಎನ್ನುವ ವಿಚಾರ ತಿಳಿದುಬರುತ್ತಿದೆ.
ಸಿಎನ್ಎನ್ ನ್ಯೂಸ್ 18 ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಬಿಜೆಪಿ 262 ರಿಂದ 277 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಎಸ್ಪಿ ಮೈತ್ರಿಕೂಟ 119ರಿಂದ 134 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್ 3 ರಿಂದ 4 ಸ್ಥಾನ ಪಡೆದರೆ, ಬಿಎಸ್ ಪಿ 7 ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಇಟಿಜಿ ರಿಸರ್ಚ್ ಸಮೀಕ್ಷೆಯ ಪ್ರಕಾರ: ಬಿಜೆಪಿ 230–245 ಸ್ಥಾನಗಳನ್ನು ಗೆಲ್ಲುವ ಭರವಸೆ ವ್ಯಕ್ತವಾಗಿದೆ. ಕಾಂಗ್ರೆಸ್ 2–6, ಎಸ್ಪಿ+ 150–165, ಬಿಎಸ್ಪಿ 5–10 ಸ್ಥಾನ ಪಡೆಯುವ ಸಾಧ್ಯತೆ ವ್ಯಕ್ತವಾಗಿದೆ.
ಒಟ್ಟಾರೆ ಸದ್ಯ ನಡೆದಿರುವ ಎಕ್ಸಿಟ್ ಪೋಲ್ ಪ್ರಕಾರ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕಮಲ ಅರಳುವ ನಿರೀಕ್ಷೆ ಇದೆ.
ಪಂಜಾಬ್
ಇನ್ನು ಪಂಜಾಬ್ ನಲ್ಲಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜನ ಆಮ್ ಆದ್ಮಿಗೆ ಆಶೀರ್ವಾದ ನೀಡಿದಂತೆ ಕಂಡು ಬರುತ್ತಿದೆ.
ಇಟಿಜಿ ರಿಸರ್ಚ್ ಸಮೀಕ್ಷೆ ಪ್ರಕಾರ ಎಎಪಿ 70–75, ಕಾಂಗ್ರೆಸ್ – 27–33, ಅಖಾಲಿದಳ 7–13 ಹಾಗೂ ಬಿಜೆಪಿ 3–7 ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಎಎಪಿ 76–90, ಅಖಾಲಿದಳ 7–11, ಬಿಜೆಪಿ 1–4, ಕಾಂಗ್ರೆಸ್ 19–31 ಸ್ಥಾನ ಹೊಂದುವ ನಿರೀಕ್ಷೆ ವ್ಯಕ್ತವಾಗಿದೆ.
ನ್ಯೂಸ್ಎಕ್ಸ್– ಪೋಲ್ಸ್ಟರ್: ಬಿಜೆಪಿ 1–6, ಕಾಂಗ್ರೆಸ್ 24–29, ಎಎಪಿ 56–61, ಅಖಾಲಿದಳ 22–26 ಸ್ಥಾನ ಸಿಗಲಿದೆ ಎಂದು ಉಲ್ಲೇಖವಾಗಿದೆ.
ಗೋವಾ:
ಗೋವಾದಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಲಕ್ಷಣಗಳಿವೆ ಎಂಬುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ವರದಿಯಾಗಿದೆ. ಆದರೆ ಈ ಬಾರಿ ಆಡಳಿತರೂಢ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಇಂಡಿಯಾ ಟಿವಿ– ಸಿಎನ್ಎಸ್ ವರದಿ ಪ್ರಕಾರ, ಬಿಜೆಪಿ 16–22, ಕಾಂಗ್ರೆಸ್ 11–17, ಟಿಎಂಸಿ 1–2
ಇಟಿಜಿ ರಿಸರ್ಚ್: ಬಿಜೆಪಿ 17–20, ಕಾಂಗ್ರೆಸ್ 15–17, ಟಿಎಂಸಿ 3–4
ನ್ಯೂಸ್ ಎಕ್ಸ್–ಪೋಲ್ಸ್ಟರ್: ಬಿಜೆಪಿ 17–19, ಕಾಂಗ್ರೆಸ್ 11–13, ಟಿಎಂಸಿ 0
ಝೀ ನ್ಯೂಸ್–ಡಿಸೈನ್ಬಾಕ್ಸ್ಡ್: ಬಿಜೆಪಿ 13–18, ಕಾಂಗ್ರೆಸ್ 14–19, ಟಿಎಂಸಿ 2–5
ಉತ್ತರಾಖಂಡ
ಉತ್ತರಾಖಂಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದ್ದಂತೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಂಡುಬರುತ್ತಿದೆ.
ಎಬಿಪಿ ನ್ಯೂಸ್ – ಸಿವೋಟರ್ : ಬಿಜೆಪಿ 26–32, ಕಾಂಗ್ರೆಸ್ 32–38, ಎಎಪಿ 0–2
ಇಟಿಜಿ ರಿಸರ್ಚ್ : ಬಿಜೆಪಿ 37–40, ಕಾಂಗ್ರೆಸ್ 29–32, ಎಎಪಿ 0–1
ನ್ಯೂಸ್ 24: ಬಿಜೆಪಿ 43, ಕಾಂಗ್ರೆಸ್ 24, ಎಎಪಿ 0
ನ್ಯೂಸ್ಎಕ್ಸ್–ಪೋಲ್ಸ್ಟರ್: ಬಿಜೆಪಿ 31–33, ಕಾಂಗ್ರೆಸ್ 33–35, ಎಎಪಿ 0–3
ಮಣಿಪುರ
ಮಣಿಪುರದಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಮಲ ಅರಳುವ ಸಾಧ್ಯತೆ ಇದೆ ಎಂದು ಉಲ್ಲೇಖವಾಗಿದೆ.
ಇಂಡಿಯಾ ನ್ಯೂಸ್: ಬಿಜೆಪಿ 23–28, ಕಾಂಗ್ರೆಸ್+ 10–14
ಇಂಡಿಯಾ ಟಿವಿ–ಗ್ರೌಂಡ್ ಜೀರೊ ರಿಸರ್ಚ್: ಬಿಜೆಪಿ 26–31, ಕಾಂಗ್ರೆಸ್ 12–17