ನವದೆಹಲಿ, ಮಾ 07 (DaijiworldNews/HR): ಎನ್ಎಸ್ಇಯ ಬಹುಕೋಟಿ ಮಾರುಕಟ್ಟೆ ವಂಚನೆ ಮತ್ತು ಅಕ್ರಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ(ಎನ್ಎಸ್ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯವು 7 ದಿನಗಳ ಕಾಲ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಕಸ್ಟಡಿಗೆ ನೀಡಿದೆ.
ಸಿಬಿಐಯು ಆರೋಪಿ ಚಿತ್ರಾ ರಾಮಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಇನ್ನು ಪ್ರತಿದಿನ ಸಂಜೆ ಚಿತ್ರಾ ರಾಮಕೃಷ್ಣ ಅವರ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಿದ ನ್ಯಾಯಾಲಯ, ಚಿತ್ರಾ ರಾಮಕೃಷ್ಣ ಅವರನ್ನು ಪ್ರತಿ 24 ಗಂಟೆಗಳಿಗೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸಿಬಿಐಗೆ ಸೂಚಿಸಿದೆ.
ಚಿತ್ರಾ ರಾಮಕೃಷ್ಣ ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು 2016ರಲ್ಲಿ ತೊರೆದಿದ್ದರು.