ರಾಮನಗರ, ಮಾ 07 (DaijiworldNews/HR): ಮಾನ ಮರ್ಯಾದೆ ಇಲ್ವಾ? ಎಂದು ಹೆಲ್ಮೆಟ್ ಹಾಕದ ಬೈಕ್ ಸವಾರರಿಂದ ಭಾರಿ ಪ್ರಮಾಣದಲ್ಲಿ ದಂಡ ವಸೂಲಿ ಮಾಡುತ್ತಿದ್ದು ಸಂಚಾರಿ ಪೊಲೀಸರನ್ನು ಹೆಚ್.ಡಿ. ಕುಮಾರಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಂಚಾರಿ ಪೊಲೀಸರು ಜನರ ರಕ್ಷಿಸಲು ಇದ್ದೀರೋ ? ಇಲ್ಲ ಜನರಿಗೆ ತೊಂದರೆ ಕೊಡಲು ಇದ್ದೀರೋ ? ನಿನ್ನೆ ಮಧ್ಯಾಹ್ನ ದುಡ್ದು ಹೊಡೆದುಕೊಂಡು ಹೋಗಿದ್ದಾರೆ, ಅವರನ್ನು ಹಿಡಿಯಲಾಗಲಿಲ್ಲ. ಈಗ ಜನರಿಂದ ವಸೂಲಿ ಮಾಡಿ ತೊಂದರೆ ಕೊಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಹೆರಿಗೆಗೆ ಹೋಗುವ ಹೆಣ್ಮಕ್ಕಳನ್ನು ರಸ್ತೆಯಲ್ಲಿ ಅಡ್ಡ ಹಾಕ್ತೀರಾ ? ಮಾನ ಮರ್ಯಾದೆ ಇಲ್ವಾ? ಸರ್ಕಾರ ಸಂಬಳ ಕೊಡಲ್ವ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.