ಅಮೃತಸರ, ಮಾ 07 (DaijiworldNews/HR): ಪಂಜಾಬ್ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಕ್ಯಾಂಪ್ ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ಸಾತೆಪ್ಪ ಎಸ್.ಕೆ ಸರ್ವೀಸ್ ರೈಫಲ್ನಿಂದ ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿ ನಾಲ್ವರ ಸಾವಿಗೆ ಕಾರಣರಾಗಿದ್ದು, ಬಿಎಸ್ಎಫ್ ಯೋಧ ಕನ್ನಡಿಗ, ಹುಕ್ಕೇರಿ ತಾಲೂಕಿನ ಯಮಕನಮರಡಿಯ ನಿವಾಸಿ ಎಂದು ತಿಳಿದು ಬಂದಿದೆ.
ನಾಲ್ವರನ್ನು ಗುಂಡಿಕ್ಕಿ ಕೊಂದ ಬಳಿಕ ಯೋಧ ಸಾತೆಪ್ಪ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇನ್ನು ಭಾರತ ಮತ್ತು ಪಾಕಿಸ್ಥಾನ ಗಡಿ ಪ್ರದೇಶ ಅಟ್ಟಾರಿ- ವಾಘಾದಿಂದ 12-13 ಕಿ.ಮೀ. ದೂರದಲ್ಲಿ ಈ ಕ್ಯಾಂಪ್ ಇದ್ದು, ಸಾತೆಪ್ಪ ಅವರಿಗೆ ತಮಗೆ ನೀಡಿದ್ದ ಕರ್ತವ್ಯದ ಅವಧಿ ಬಗ್ಗೆ ಅಸಮಾಧಾನವಿತ್ತು. ಇದೇ ಕಾರಣದಲ್ಲಿ ಜಗಳ ನಡೆದು, ಗುಂಡು ಹಾರಿಸಿರ ಬಹುದು ಎಂದು ಹಿರಿಯ ಅಧಿಕಾರಿ ಗಳು ಶಂಕಿಸಿದ್ದಾರೆ.