ಮುಂಬೈ, ಮಾ 06 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನ ಬಂದರ್ ನಲ್ಲಿ ಭಾರತದ 21 ಮಂದಿ ಹಡಗು ಸಿಬಂದಿ ಬಾಕಿಯಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಎಂವಿ ಮೇರಿಟೈಮ್ ನೌಕಾಸಂಸ್ಥೆ ತಿಳಿಸಿದೆ.
ಉಕ್ರೇನ್ ನ ಮೈಕೊಲೈವ್ ಬಂದರು ಪ್ರದೇಶದಲ್ಲಿ ಈ ಸಿಬಂದಿ ಸಿಲುಕಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಅವರಿಗೆ ಸ್ವದೇಶಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಮೇರಿಟೈಮ್ ಮಾತ್ರವಲ್ಲದೆ ಇತರ 24 ಹಡಗುಗಳು ಈ ಬಂದರಿನಲ್ಲೇ ಠಿಕಾಣಿ ಹೂಡಿವೆ. ಯುದ್ಧದ ಕಾರಣದಿಂದಾಗಿ ಎಲ್ಲರೂ ಆತಂಕದಲ್ಲಿದ್ದಾರೆ ಎಂದು ಸಂಸ್ಥೆಯ ಸಿಇಓ ಸಂಜಯ್ ಪ್ರೆಶರ್ ತಿಳಿಸಿದ್ದಾರೆ.