ನವದೆಹಲಿ, ಮಾ 06 (DaijiworldNews/HR): ಯುದ್ದಗ್ರಸ್ಥ ಉಕ್ರೇನ್ನಲ್ಲಿ ಸಿಲುಕಿರುವವರ ಪೈಕಿ 210 ಭಾರತೀಯರನ್ನು ವಿಶೇಷ ವಾಯುಪಡೆ ವಿಮಾನದ ಮೂಲಕ ಭಾನುವಾರ ಬೆಳಗ್ಗೆ ಕರೆತರಲಾಗಿದೆ.
ವಾಯುಪಡೆ ನಿಲ್ದಾಣಕ್ಕೆ ಬೆಳಗ್ಗೆ 5 ಗಂಟೆ ಸುಮಾರಿಗೆ ವಿಮಾನ ಆಗಮಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ 210 ಜನರು ಆಗಮಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,
ಇನ್ನು 3,000 ಭಾರತೀಯರನ್ನು 15 ವಿಮಾನಗಳ ಮೂಲಕ ಶನಿವಾರ ಕರೆತರಲಾಗಿದ್ದು, ಈ ಕಾರ್ಯಾ ಚರಣೆಗೆ 12 ವಿಶೇಷ ನಾಗರಿಕ ವಿಮಾನಗಳು ಹಾಗೂ ಮೂರು ವಾಯುಪಡೆ ವಿಮಾನಗಳನ್ನು ನಿಯೋಜಿಸಲಾಗಿತ್ತು.
ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಉಕ್ರೇನ್ ಫೆ.24ರಿಂದ ತನ್ನ ವಾಯು ಪ್ರದೇಶ ಬಳಕೆಯನ್ನು ನಿರ್ಬಂಧಿಸಿದ್ದು, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಹಂಗೆರಿ ಹಾಗೂ ಸ್ಲೋವೇಕಿಯಾದ ಮಾರ್ಗವಾಗಿ ಕರೆತರಲಾಗುತ್ತಿದೆ.