ನವದೆಹಲಿ, ಮಾ 05 (DaijiworldNNews/HR): ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳ ನಡೆಯುತ್ತಿದ್ದು, ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
2,200 ಭಾರತೀಯರನ್ನ ಹೊತ್ತ 11 ಸ್ಥಳಾಂತರ ವಿಮಾನಗಳು ಭಾನುವಾರ ಸಂಘರ್ಷ ವಲಯದಿಂದ ಬರಲಿವೆ ಎಂದು ಕೇಂದ್ರ ಶನಿವಾರ ಮಾಹಿತಿ ನೀಡಿದ್ದು, ಉಕ್ರೇನ್ನಿಂದ ಭಾರತೀಯರನ್ನ ಸ್ಥಳಾಂತರಿಸಲು ಐಎಎಫ್ʼನ ಸಿ-17 ವಿಮಾನ ಸೇರಿದಂತೆ ಒಟ್ಟು 16 ವಿಮಾನಗಳನ್ನ ಶನಿವಾರ ನಿಗದಿಪಡಿಸಲಾಗಿತ್ತು.
ಆಪರೇಶನ್ ಗಂಗಾ' ಅಡಿಯಲ್ಲಿ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೊ, ಸ್ಪೈಸ್ ಜೆಟ್ ಮತ್ತು ಭಾರತೀಯ ವಾಯುಪಡೆಯನ್ನು ಸ್ಥಳಾಂತರಗೊಂಡವರಿಗೆ ನಿರ್ವಹಿಸಲಾಗುವುದು.