ಶಿವಮೊಗ್ಗ, ಮಾ 05 (DaijiworldNNews/HR): ನನ್ನನ್ನು ರಾಜಕೀಯವಾಗಿ ಯಡಿಯೂರಪ್ಪ ಅವರು ಬೆಳೆಸಿದ್ದಾರೆ. ಅವರಿಲ್ಲದೇ ಇದ್ದರೇ ನಾನು ಸಿಎಂ ಆಗೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದೇ ಬಿಎಸ್ವೈ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬೊಮ್ಮಾಯಿ, ನನಗೆ ಯಡಿಯೂರಪ್ಪ ಸಿಕ್ಕಿದ್ದೇ ಪೂರ್ವ ಜನ್ಮದ ಪುಣ್ಯವಾಗಿದ್ದು, ನಾನು ರಾಜಕೀಯವಾಗಿ ಬೆಳೆಯಲು, ಮುಖ್ಯಮಂತ್ರಿಯಾಗೋದಕ್ಕೆ ಅವರೇ ಕಾರಣವಾಗಿದ್ದಾರೆ. ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲಿದೆ ಎಂದರು.
ಇನ್ನು ಯಡಿಯೂರಪ್ಪ ಅವರು ಮುತ್ಸದ್ಧಿ ರಾಜಕಾರಣಿ. ದೂರದೃಷ್ಠಿಯುಳ್ಳಂತ ನಾಯಕರಾಗಿದ್ದಾರೆ. ಈ ರಾಜ್ಯದ ಜನತೆಯ ಬಗ್ಗೆ ಅಪಾರ ಕಾಳಜಿ ಕೂಡ ಹೊಂದಿದ್ದಾರೆ. ಅವರ ಮಾರ್ಗದರ್ಶನ, ಆಡಳಿತ ವೈಖರಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದ್ದಾರೆ.