ಮೀರತ್, ಮಾ 05 (DaijiworldNews/MS): ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೋಗಿಯನ್ನು ತಳ್ಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ಸ್ಟೇಶನ್ನಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡ ಪ್ರಯಾಣಿಕರು, ಉಳಿದ ಕಂಪಾರ್ಟ್ಮೆಂಟ್ಗಳನ್ನು ಬೆಂಕಿ ಹತ್ತಿಕೊಂಡ ಎಂಜಿನ್ನಿಂದ ಮತ್ತು ಎರಡು ಬೋಗಿಗಳಿಂದ ಬೇರ್ಪಡಿಸಲು ಉಳಿದ ಕೋಚ್ಗಳನ್ನು ತಳ್ಳಿದ್ದಾರೆ.
ದೆಹಲಿಯಿಂದ ಸಹರಾನ್ಪುರಕ್ಕೆ ರೈಲು ಚಲಿಸುತ್ತಿತ್ತು. ದೌರಾಲಾ ರೈಲ್ವೆ ಸ್ಟೇಶನ್ನಲ್ಲಿ ಇಂಜಿನ್ ಹಾಗೂ ಎರಡು ಬೋಗಿಗಳಿಗೆ ಬೆಂಕಿ ತಗಲಿತ್ತು. ಇದರಿಂದ ಬೇರೆ ಬೋಗಿಗಳಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯಿತ್ತು.ಬೆಂಕಿ ಹೊತ್ತಿಕೊಂಡಿದ್ದ ಇಂಜಿನ್ ಮತ್ತು ಎರಡು ಬೋಗಿಗಳನ್ನು ಉಳಿದ ಕೋಚ್ಗಳಿಂದ ಬೇರ್ಪಡಿಸಲು ಪ್ರಯಾಣಿಕರೆಲ್ಲರೂ ಸೇರಿ ರೈಲನ್ನು ತಳ್ಳಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ.
ನಂತರ ಅಗ್ನಿಶಾಮಕ ದಳದವರು ದೌರಾಲಾ ನಿಲ್ದಾಣಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.