ನವದೆಹಲಿ, ಮಾ 05 (DaijiworldNNews/HR): ಉಕ್ರೋನ್ನಿಂದ ಬಂದಿರುವ ಹಾಗೂ ಕೊರೊನಾ ಕಾರಣದಿಂದ ಬಾಕಿಯಾಗಿರುವ ವಿದೇಶಿ ವೈದ್ಯಕೀಯ ಪದವೀದರರಿಗೆ ಭಾರತದಲ್ಲಿ ಇಂಟರ್ನ್ಷಿಪ್ ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಎನ್ಎಂಸಿ, ಭಾರತದಲ್ಲಿ ಇಂಟರ್ನ್ಷಿಪ್ ಪೂರ್ಣಗೊಳಿಸಲು ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಅದನ್ನೇ ರಾಜ್ಯ ವೈದ್ಯಕೀಯ ಕೌನ್ಸಿಲ್ಗಳು ಪರಿಗಣಿಸಬಹುದು ಎಂದು ತಿಳಿಸಿದೆ.
ಇನ್ನು ಕೊರೊನಾಅಥವಾ ಯುದ್ಧ ಮುಂತಾದ ಕಾರಣಗಳಿಂದ ಇಂಟರ್ನ್ಷಿಪ್ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವ ಕೆಲವು ವಿದೇಶಿ ವೈದ್ಯಕೀಯ(ಎಂಬಿಬಿಎಸ್) ಪದವೀದರರು ಇದ್ದು, ಅಂತಹ ವಿದ್ಯಾರ್ಥಿಗಳು ಇಂಟರ್ನ್ಷಿಪ್ಅನ್ನು ಭಾರತದಲ್ಲಿ ಪೂರ್ಣಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು, ಇದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಮಾಹಿತಿ ನೀಡಿದೆ.