ಜಮ್ಮು, ಮಾ 05 (DaijiworldNNews/HR): ಶಂಕಿತ ಪಾಕಿಸ್ತಾನಿ ಡ್ರೋನ್ನ ಮೇಲೆ ಗಡಿ ಭದ್ರತಾ ಪಡೆ(ಬಿಎಸ್ಎಫ್) ಶನಿವಾರ ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಶನಿವಾರ ಮುಂಜಾನೆ 4.10 ರ ಸುಮಾರಿಗೆ ಅರ್ನಿಯಾದಲ್ಲಿ ಶಂಕಿತ ಡ್ರೋನ್ ಹಾರಾಡುವುದನ್ನು ಗಮನಿಸಿ ಬಿಎಸ್ಎಫ್ ಗುಂಡುರಿಸಿದ್ದು, ಬಳಿಕ ಪೊಲೀಸರ ನೆರವಿನಿಂದ ಪ್ರದೇಶವನ್ನು ಸುತ್ತುವರಿದು ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಇನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡ ನಂತರ 10 ನಿಮಿಷಗಳ ಅವಧಿಯಲ್ಲಿ ಬಿಎಸ್ಎಫ್ ಪಡೆಗಳು ಸುಮಾರು 18 ಸುತ್ತು ಗುಂಡು ಹಾರಿಸಿತ್ತು ಎಂದು ತಿಳಿಸಿದ್ದಾರೆ.