ನವದೆಹಲಿ, ಮಾ 05 (DaijiworldNews/MS): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ತವರಾದ ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಸ್ಪರ್ಧಿಸಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ಜನರು ನನ್ನ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ನಾನು ಸಂಸತ್ ಪ್ರವೇಶಕ್ಕಾಗಿ ಮೊರಾದಾಬಾದ್ ಅಥವಾ ಉತ್ತರ ಪ್ರದೇಶದ ಯಾವುದೇ ನಗರವನ್ನು ಆಯ್ಕೆ ಮಾಡಬಹುದೆಂದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ರಾಜಕೀಯದಲ್ಲಿ ಬದಲಾವಣೆ ತರುವ ವಿಶ್ವಾಸವಿದೆ ಮತ್ತು ನಾನು ಜನರ ಜೀವನವನ್ನು ಉತ್ತಮವಾಗಿ ಬದಲಾಯಿಸಲು ಬಯಸುತ್ತೇನೆ" ಎಂದು ವಾದ್ರಾ ಹೇಳಿದ್ದಾರೆ
ಚುನಾವಣೆ ಇರಲಿ ಅಥವಾ ಚುನಾವಣೆಯಿಲ್ಲದಿರಲಿ, ನಾನು ದೇವಸ್ಥಾನಗಳು, ಮಸೀದಿಗಳು, ಚರ್ಚ್ಗಳು ಮತ್ತು ಗುರುದ್ವಾರಗಳಿಗೆ ಹೋಗುತ್ತೇನೆ. ದೇಶಾದ್ಯಂತ, ನಾನು ರಾಜಕೀಯದಲ್ಲಿ ಬದಲಾವಣೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಜನರ ಜೀವನವು ಉತ್ತಮವಾಗಿ ಬದಲಾಗಬೇಕೆಂದು ನಾನು ಬಯಸುತ್ತೇನೆ, ಪ್ರಿಯಾಂಕಾ ಮನೆಗೆ ಬಂದಾಗ, ನಾವು ರಾಜಕೀಯವನ್ನು ಮಾತನಾಡುತ್ತೇವೆ ಮತ್ತು ಹಳ್ಳಿಗಳ ಬಡ ಜನರ ಸಂಕಷ್ಟಗಳನ್ನು ಹೇಗೆ ತಗ್ಗಿಸುವುದು ಎಂದು ಚರ್ಚಿಸುತ್ತೇವೆ, 'ಅವರು ತಿಳಿಸಿದ್ದಾರೆ
ಈ ಹಿಂದೆಯೂ ರಾಬರ್ಟ್ ವಾದ್ರಾ ರಾಜಕೀಯ ಧುಮುಕುವ ಸುಳಿವು ನೀಡಿದ್ದರು.
ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಾದ್ರಾ, "ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಯಾವುದೇ ಹುದ್ದೆಯ ಬಗ್ಗೆ ಯೋಚಿಸುವುದಿಲ್ಲ. ರಾಜಕೀಯವು ಅವರ ರಕ್ತದಲ್ಲಿದೆ. ಅವರು ಎಲ್ಲೆಡೆ ಜನರಿಗಾಗಿ ಶ್ರಮಿಸುತ್ತಾರೆ. ಉತ್ತರ ಪ್ರದೇಶದ ಜನ ಬಯಸಿದರೆ ಪ್ರಿಯಾಂಕಾ ಅವರನ್ನು ಸಿಎಂ ಆಗಿ ನೋಡಬಹುದು. ಆದರೆ ಅವರು ಅವರು ರಾಷ್ಟ್ರೀಯ ನಾಯಕಿಯಾಗಿರುವುದರಿಂದ ಯುಪಿಗೆ ಮಾತ್ರ ಸೀಮಿತವಾಗಿರಲು ಬಯಸುತ್ತಾರೆಯೇ ಅಥವಾ ರಾಷ್ಟ್ರೀಯ ವೇದಿಕೆಗೆ ಹೋಗುತ್ತಾರೋ ಅದು ಅವರ ನಿರ್ಧಾರವಾಗಿರುತ್ತದೆ ಎಂದು ಹೇಳಿದ್ದಾರೆ.