ಕೈವ್, ಮಾ 05 (DaijiworldNews/DB): ಕೈವ್ನಲ್ಲಿ ಸಂಕಷ್ಟದಲ್ಲಿದ್ದು, ಪ್ರಸ್ತುತ ತುಂಬು ಗರ್ಭಿಣಿ ಪತ್ನಿಯೊಂದಿಗೆ ಪೋಲೆಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಆಶ್ರಯ ಕೊಠಡಿಯಲ್ಲಿ ತಂಗಿರುವ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ’ಗಂಗಾ’ ಎಂದು ಹೆಸರಿಸಲು ನಿರ್ಧರಿಸಿದ್ದಾರೆ.
ಕೇರಳ ಮೂಲದ ಅಭಿಜಿತ್ ಅವರೇ ಮಗುವಿಗೆ ಈ ಹೆಸರಿಡಲು ನಿರ್ಧರಿಸಿದ ವ್ಯಕ್ತಿ. ತನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಪ್ರಸ್ತುತ ಪೋಲೆಂಡ್ನ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನನ್ನ ಮಗು ಬರುವ ನಿರೀಕ್ಷಿತ ಸಮಯ ಮಾರ್ಚ್ 26. ರಕ್ಷಣಾ ಕಾರ್ಯಾಚರಣೆಯ 'ಗಂಗಾ' ಹೆಸರನ್ನೇ ಮಗುವಿಗೆ ಇಡಲು ನಿರ್ಧರಿಸಲಾಗಿದೆ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ಅಭಿಜಿತ್ ಉಕ್ರೇನ್ ನ ಕೈವ್ ನಲ್ಲಿ ಸಣ್ಣ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ’ಕೈವ್ನಲ್ಲಿ ಸಿಲುಕಿಕೊಂಡಾಗ ಆಪರೇಷನ್ ಗಂಗಾ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಸಹಾಯದಿಂದ ರಕ್ಷಣೆ ದೊರೆತು ಪತ್ನಿಯೊಂದಿಗೆ ಪೋಲೆಂಡ್ಗೆ ಬಂದಿದ್ದೇನೆ. ಅಧಿಕಾರಿಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು,' ಎಂದು ಅಭಿಜಿತ್ ತಿಳಿಸಿದ್ದಾರೆ.