ಬೆಂಗಳೂರು, ಮಾ 04 (DaijiworldNews/HR): ಕಾಂಗ್ರೆಸ್ ಹೋರಾಟದಿಂದಾಗಿ ಮೇಕೆದಾಟು ಯೋಜನೆಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಣ ಬಿಡುಗಡೆ ಮಾಡಿದ್ದಾರೆ ಎಂದು ಪರಿಷತ್ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಂದಿನ ಚುನಾವಣಾ ದೃಷ್ಟಿಯಲ್ಲಿ ಸಿಎಂ ಬೊಮ್ಮಯಿ ಚೊಚ್ಚಲ ಬಜೆಟ್ ಮಂಡನೆ ಮಾಡಿ, ಎಲ್ಲರನ್ನೂ ಸಂತೃಪ್ತ ಪಡಿಸಲು ಮುಂದಾಗಿದ್ದಾರೆ. ಬಿಜೆಪಿ ಚುನಾವಣೆ ಪ್ರಣಾಳಿಕೆ ತರ ಈ ಬಜೆಟ್ ಇದ್ದು, ದುರ್ಬಲ ವರ್ಗದವರಿಗೆ ಅನ್ಯಾಯವಾಗಿದೆ ಎಂದರು.
ಇನ್ನು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕೆ ಮಾಡಿದ್ದ ಸರ್ಕಾರ ಇಂದು ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಒಂದು ಸಾವಿರ ಘೋಷಣೆ ಮಾಡಿದ್ದು, ಆ ಮೂಲಕ ಯೋಜನೆ ಅವಶ್ಯಕತೆ ಬಗ್ಗೆ ಗೊತ್ತಾಗಿದೆ. ಹಣ ಬಿಡುಗಡೆ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.